Monday, 1 September 2014

ಮೈತ್ರಿಯಾ ಜೊತೆ ದೈಹಿಕ ಸಂಪರ್ಕ ಮಾಡಿದ್ದು ಯಾರು?

ಬೆಂಗಳೂರು, ಸೆ.1: ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಮೇಲಿನ ಅತ್ಯಾಚಾರ ಹಾಗೂ ವಂಚನೆ ಪ್ರಕರಣಕ್ಕೆ ಸೋಮವಾರ ಮತ್ತೊಂದು ತಿರುವು ಸಿಕ್ಕಿದೆ. ಮೈತ್ರಿಯಾ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಸಾಬೀತುಪಡಿಸಲು ಪ್ರಮುಖ ಎನಿಸಿದ್ದ ವೈದ್ಯಕೀಯ ಪರೀಕ್ಷೆ ವರದಿ ಹೊರಬಿದ್ದಿದೆ.
ಆದರೆ, ಮೈತ್ರಿಯಾ ಗೌಡ ಬಿನ್ ವೆಂಕಟೇಶ ಗೌಡ ಅವರ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ಎರಡು ತಿಂಗಳ ಹಿಂದೆ ಅವರು ದೈಹಿಕ ಸಂಪರ್ಕಕ್ಕೆ ಒಳಪಟ್ಟಿದ್ದಾರೆ. ಅತ್ಯಾಚಾರ ನಡೆದಿರುವ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಡಾ. ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನೀಡಿದ ವರದಿಯಲ್ಲಿ ಹೇಳಲಾಗಿದೆ.
ವಿಚಿತ್ರವೆಂದರೆ ಮೂರ್ನಾಲ್ಕು ದಿನಗಳ ಹಿಂದೆಯೇ ವೈದ್ಯಕೀಯ ಪರೀಕ್ಷೆ ವರದಿ ಬಹಿರಂಗವಾಗಿತ್ತು. ಮೈತ್ರಿಯಾ ಮೇಲೆ ರೇಪ್ ಆಗಿಲ್ಲ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇಂದು ಅಧಿಕೃತವಾಗಿದೆ ಅಷ್ಟೇ.
ಇದೇ ವೇಳೆ ಮೈತ್ರಿಯಾ ಗೌಡ ನಗರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಸೋಮವಾರ ಮತ್ತೊಮ್ಮೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ವಂಚನೆ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. [62 ಪುಟಗಳ ಹೇಳಿಕೆ ನೀಡಿದ ನಟಿ ಮೈತ್ರಿಯಾ ಗೌಡ]
ಕಾರ್ತಿಕ್ ಗೌಡ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಬಿ.ಮುದಿಗೌಡರ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ, ಕಾರ್ತಿಕ್ ಗೆ ನೋಟಿಸ್ ಜಾರಿ ಮಾಡುವಂತೆ ಆರ್.ಟಿ. ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ. 

No comments:

Post a Comment

| Copyright © 2013 Mangalore News